ನಮ್ಮ ಬಗ್ಗೆ
2015-16 ನೇ ಸಾಲಿನ ಆಯವ್ಯಯದ ಕಂಡಿಕೆ ಸಂಖ್ಯೆ 210 ರಲ್ಲಿ ರಾಜ್ಯದ ಸಫಾಯಿ ಕರ್ಮಚಾರಿಗಳ ಹಾಗೂ ಪೌರಕಾರ್ಮಿಕರ ಸರ್ವತೋಮುಖ ಅಭಿವೃದ್ದಿಗಾಗಿ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ದಿ ನಿಗಮವನ್ನು ಸ್ಥಾಪಿಸಲು ಘೋಷಿಸಲಾಗಿದೆ. ಅದರಂತೆ ಸರ್ಕಾರದ ಆದೇಶ ಸಂಖ್ಯೆ ಸಕಇ 215 ಎಸ್ಡಿಸಿ 2015 ದಿನಾಂಕ 02.02.2016 ರಲ್ಲಿ ರಾಜ್ಯದ ಸಫಾಯಿ ಕರ್ಮಚಾರಿಗಳ ಹಾಗೂ ಪೌರಕಾರ್ಮಿಕರ ಸರ್ವತೋಮುಖ ಅಭಿವೃದ್ದಿಗಾಗಿ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ದಿ ನಿಗಮವನ್ನು ಕಂಪನಿ ಕಾಯ್ದೆ 2013 ರನ್ವಯ ಸ್ಥಾಪಿಸಿ ಆದೇಶಿಸಲಾಗಿದೆ. ಸರ್ಕಾರದ ಆದೇಶದಂತೆ ನಿಗಮವನ್ನು ಕಂಪನಿ ಕಾಯ್ದೆ 2013 ರಡಿ ದಿನಾಂಕ 06.06.2016 ರಂದು ನೊಂದಾಯಿಸಲಾಗಿದೆ.ನಿಗಮದ ಮೂಲ ಉದ್ದೇಶಗಳು:


1. ಸಫಾಯಿ ಕರ್ಮಚಾರಿಗಳ ಹಾಗೂ ಪೌರಕಾರ್ಮಿಕರ ಆರ್ಥಿಕ ಅಭಿವೃದ್ದಿಗಾಗಿ ಸರ್ಕಾರದಿಂದ ಸಹಾಯಧನ ಮತ್ತು ಬ್ಯಾಂಕ್ ಸಾಲ ಒದಗಿಸಿ ಅವರಿಗೆ ಸ್ವಯಂ ಉದ್ಯೋಗ ಕಲ್ಪಿಸಿ ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು.
2. ಸಫಾಯಿ ಕರ್ಮಚಾರಿಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಹಾಕಿಕೊಂಡು ಅವರ ಅಭಿವೃದ್ದಿ ಮಾಡುವುದು.
3. ಸಫಾಯಿ ಕರ್ಮಚಾರಿಗಳು ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿವೇತನ/ ಧನಸಹಾಯ ಮಾಡುವುದು.
4. ಸಫಾಯಿ ಕರ್ಮಚಾರಿಗಳಿಗೆ ವೃತ್ತಿಕೌಶಲ ತರಬೇತಿ ನೀಡಿ, ಈ ವೃತ್ತಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಸೌಲಭ್ಯ ನೀಡುವುದು.
5. ಸಫಾಯಿ ಕರ್ಮಚಾರಿಗಳು ವಾಸವಿರುವ ಕಡೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವುದು.